ನ್ಯೂಯಾರ್ಕ್: ಅಮೆರಿಕಾದ ಕೋರ್ಟ್ ಗೌತಮ್ ಅದಾನಿ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿದೆ. ಅಮೆರಿಕದಲ್ಲಿ ಗೌತಮ್ ಅದಾನಿ ವಿರುದ್ಧ ವಂಚನೆ ಮತ್ತು ಲಂಚದ ಆರೋಪಗಳನ್ನು ಹೊರಿಸಲಾಗಿದ್ದು, ಅಮೆರಿಕದಲ್ಲಿರುವ ತಮ್ಮ ಕಂಪನಿಯೊಂದಕ್ಕೆ ಗುತ್ತಿಗೆ ಪಡೆಯಲು 250 ಮಿಲಿಯನ್ ಡಾಲರ್ ಲಂಚ ನೀಡಿ ವಿಷಯವನ್ನು ಮರೆಮಾಚಿದ್ದಾರೆ ಎಂದು ಯುಎಸ್ ಪ್ರಾಸಿಕ್ಯೂಟರ್ಗಳು ಆರೋಪಿಸಿದ್ದಾರೆ.
ಹೀಗಾಗಿ ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ 62 ವರ್ಷದ ಗೌತಮ್ ಅದಾನಿ ವಿರುದ್ಧ ನ್ಯೂಯಾರ್ಕ್ನಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಈ ವಿಷಯದ ಕುರಿತು ಅದಾನಿ ಗ್ರೂಪ್ ಇನ್ನೂ ಪ್ರತಿಕ್ರಿಯಿಸಿಲ್ಲ.
ಅದಾನಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಮಿತ್ರ ಎಂದು ಪರಿಗಣಿಸಲಾಗಿದೆ. ರಾಜಕೀಯ ಸಂಪರ್ಕಗಳಿಂದಾಗಿ ಅದಾನಿ ಲಾಭ ಪಡೆಯುತ್ತಿದ್ದಾರೆ ಎಂದು ಭಾರತದ ವಿರೋಧ ಪಕ್ಷಗಳು ಹಿಂದಿನಿಂದಲೂ ಆರೋಪಿಸುತ್ತಿವೆ. ಆದರೆ, ಅದಾನಿ ಈ ಆರೋಪಗಳನ್ನು ತಿರಸ್ಕರಿಸುತ್ತಲೇ ಬಂದಿದ್ದಾರೆ.
ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರ ಚುನಾವಣೆಯಲ್ಲಿ ಗೆದ್ದ ಬಳಿಕ ವಕೀಲರನ್ನು ನೇಮಿಸುತ್ತಾರೆ. ಕೆಲವೇ ವಾರಗಳಲ್ಲಿ ಈ ವಿಷಯ ಹೊರ ಬಂದಿದೆ. ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿನ ಆಮೂಲಾಗ್ರ ಬದಲಾವಣೆಗಳ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ. ಕಳೆದ ವಾರ, ಅದಾನಿ ಟ್ರಂಪ್ ಅವರ ವಿಜಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದಿಸಿದರು ಮತ್ತು ಅಮೇರಿಕಾದಲ್ಲಿ $ 10 ಬಿಲಿಯನ್ ಹೂಡಿಕೆಯನ್ನು ಘೋಷಿಸಿದ್ದರು.
ವಾರೆಂಟ್ ಹೊರಡಿಸಿರುವ ವರದಿಯ ಬೆನ್ನಲ್ಲೇ ಅದಾನಿ ಸಮೂಹದ ಷೇರುಗಳ ಮೌಲ್ಯ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿವೆ.
ಅದಾನಿ ಎನರ್ಜಿ ಸೊಲೂಷನ್ಸ್ ಹಾಗೂ ಅದಾನಿ ಎಂಟರ್ಪ್ರೈಸಸ್ ಶೇ 20ರಷ್ಟು ಕುಸಿತ ಕಂಡಿವೆ. ಅದಾನಿ ಗ್ರೀನ್ ಎನರ್ಜಿ ಶೇ 19.17, ಅದಾನಿ ಟೋಟಲ್ ಗ್ಯಾಸ್ ಶೇ 18.14, ಅದಾನಿ ಪವರ್ 17.79 ಮತ್ತು ಅದಾನಿ ಪೋರ್ಟ್ಸ್ ಶೇ 15ರಷ್ಟು ಇಳಿಕೆ ಕಂಡಿವೆ.
ಅದೇ ಹೊತ್ತಿಗೆ ಅಂಬುಜಾ ಸಿಮೆಂಟ್ಸ್ ಶೇ 14.99, ಎಸಿಸಿ ಶೇ 14.54, ಎನ್ಡಿಟಿವಿ ಶೇ 14.37 ಮತ್ತು ಅದಾನಿ ವಿಲ್ಮರ್ ಶೇ 10ರಷ್ಟು ಕುಸಿತ ಕಂಡಿವೆ.
ಬಿಎಸ್ಇ ಸೆನ್ಸೆಕ್ಸ್ 547.76 ಅಂಶ ಇಳಿಕೆ ಕಂಡು 77,030.62 ಅಂಶಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ 219.10 ಅಂಶ ಇಳಿಕೆಯಾಗಿ 23,306.45 ಅಂಶಕ್ಕೆ ತಲುಪಿದೆ.
₹2,237 ಕೋಟಿ ಲಂಚದ ಆರೋಪದಲ್ಲಿ 62 ವರ್ಷದ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ವಿನೀತ್ ಎಸ್. ಜೈನ್ ವಿರುದ್ಧ ಐದು ಅಂಶಗಳ ಕ್ರಿಮಿನಲ್ ಆರೋಪಪಟ್ಟಿಯನ್ನು ನ್ಯೂಯಾರ್ಕ್ನ ಪೂರ್ವ ಜಿಲ್ಲಾ ನ್ಯಾಯಾಲಯಕ್ಕೆ ಅಮೆರಿಕದ ಪ್ರಾಸಿಕ್ಯೂಟರ್ ಸಲ್ಲಿಸಿದ್ದರು.