ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತಿ ಜೊತೆಗಿನ 29 ವರ್ಷಗಳ ದಾಂಪತ್ಯ ಬದುಕಿಗೆ ಪತ್ನಿ ಸಾಯಿರಾ ಬಾನು ಅವರು ವಿದಾಯ ಘೋಷಿಸಿದ್ದಾರೆ. ಇದು ರೆಹಮಾನ್ ಫ್ಯಾನ್ಸ್‌ಗೆ ಅಚ್ಚರಿ ಮತ್ತು ಆಘಾತವನ್ನು ಉಂಟು ಮಾಡಿದೆ. ಆದರೆ ಸಾಯಿರಾ ಬಾನು ವಿಚ್ಛೇದನ ಘೋಷಣೆ ಮಾಡಿ ಕೆಲವೇ ಗಂಟೆಗಳು ಕಳೆಯುವುದರಲ್ಲಿ ರೆಹಮಾನ್ ಅವರ ಮ್ಯೂಸಿಕ್ ಟೀಮ್‌ನ ಸದಸ್ಯೆ ಮೋಹಿನಿ ಡೇ ಕೂಡ ತಮ್ಮ ಪತಿಗೆ ವಿಚ್ಛೇದನ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ ಮೋಹಿನಿ
ತಮ್ಮ ಪತಿಗೆ ಡಿವೋರ್ಸ್ ನೀಡಿರುವ ಕುರಿತು ಮಾಹಿತಿ ಹಂಚಿಕೊಂಡಿರುವ ಮೋಹಿನಿ, “ಮಾರ್ಕ್ ಮತ್ತು ನಾನು ಭಾರವಾದ ಹೃದಯದಿಂದ ಬೇರ್ಪಡುತ್ತಿದ್ದೇವೆ ಎಂದು ಘೋಷಿಸುತ್ತಿದ್ದೇವೆ. ಮೊದಲನೆಯದಾಗಿ, ಇದು ನಮ್ಮಿಬ್ಬರ ಪರಸ್ಪರ ತಿಳುವಳಿಕೆ ಆಗಿದೆ. ಪರಸ್ಪರ ಒಪ್ಪಂದದ ಮೂಲಕ, ಜೀವನವನ್ನು ಪ್ರತ್ಯೇಕತೆವಾಗಿ ಕಳೆಯುವುದಕ್ಕೆ ಇದು ಉತ್ತಮ ಮಾರ್ಗ ಎಂದು ನಾವು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.