Home » News » 56 ವರ್ಷಗಳ ನಂತರ  ಗಯಾನಾಕ್ಕೆ  ಪ್ರಧಾನಿ ಮೋದಿ ಭೇಟಿ !

56 ವರ್ಷಗಳ ನಂತರ  ಗಯಾನಾಕ್ಕೆ  ಪ್ರಧಾನಿ ಮೋದಿ ಭೇಟಿ !

by CityXPress
0 comments

56 ವರ್ಷಗಳನಂತರ  ಗಯಾನಾಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಗಯಾನಾದ ಅಧ್ಯಕ್ಷ ಮುಹಮ್ಮದ್ ಇರ್ಫಾನ್ ಅಲಿ ಮತ್ತು 12ಕ್ಕೂ  ಹೆಚ್ಚು ಕ್ಯಾಬಿನೆಟ್ ಮಂತ್ರಿಗಳು ಅವರನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.

ಜಾರ್ಜ್ಟೌನ್ನಲ್ಲಿ ಪ್ರಧಾನಿ ಮೋದಿ ಅವರಿಗೆ ಔಪಚಾರಿಕ ಸ್ವಾಗತ ಮತ್ತು ಗಾರ್ಡ್ ಆಫ್ ಹಾನರ್ ನೀಡಲಾಯಿತು. ಗಯಾನಾದ ಅಧ್ಯಕ್ಷರು ಆಗಮಿಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರೊಂದಿಗೆ ಅಪ್ಪುಗೆಯ ಜೊತೆಗೆ  ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಪ್ರಧಾನಿ ಮೋದಿ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಮತ್ತು ದಕ್ಷಿಣ ಅಮೆರಿಕಾದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ.

“ಈ ಭೇಟಿ ಮಹತ್ವದ್ದಾಗಿದ್ದು, ಇದು ನಮ್ಮ ಎರಡು ದೇಶಗಳ ನಡುವಿನ ದೀರ್ಘಕಾಲೀನ ಸಂಬಂಧವನ್ನು ಪ್ರತಿಬಿಂಬಿಸುತ್ತದೆ, ಇದನ್ನು ನಾನು ಐತಿಹಾಸಿಕವಾಗಿ ಬಲಶಾಲಿ ಎಂದು ವಿವರಿಸುತ್ತೇನೆ. ಸುಮಾರು ಐದು ದಶಕಗಳ ನಂತರ,  ನಿಖರವಾಗಿ ಹೇಳಬೇಕೆಂದರೆ 56 ವರ್ಷಗಳ ನಂತರ ಈ ಭೇಟಿಯು ನಮ್ಮ ನಡುವೆ ಅನೇಕ ವರ್ಷಗಳಿಂದ ಬೆಳೆದಿರುವ ನಿರಂತರ ಸ್ನೇಹ, ಪರಸ್ಪರ ನಂಬಿಕೆ ಮತ್ತು ಸಹಕಾರದ ಸಂಕೇತವಾಗಿದೆ ” ಎಂದು ಗಯಾನಾದಲ್ಲಿನ ಭಾರತದ ರಾಯಭಾರಿ ಅಮಿತ್ ಎಸ್ ತೆಲಾಂಗ್ ಪ್ರಧಾನಿ ಮೋದಿಯವರ ಭೇಟಿಯ ಬಗ್ಗೆ ಹೇಳಿದರು.

banner

“ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ತೊಡಗಿರುವವರು ಸೇರಿದಂತೆ ಗಯಾನಾದಲ್ಲಿನ ನಮ್ಮ ಭಾರತೀಯ ಸಂಖ್ಯ ದಿನದಿಂದ ದಿನಕ್ಕೆ ಬೇಳೆಯುತ್ತಿದೆ. ಈ ಭೇಟಿಯ ಭಾರತೀಯರಲ್ಲಿ ಹೆಚ್ಚಿನ ಉತ್ಸಾಹ , ಆಶಾವಾದ ಮತ್ತು ಇಲ್ಲಿ ಅಭಿವೃದ್ದಿಗೆ ಪ್ರಧಾನಿ ಮೋದಿಯವರ ಪ್ರವಾಸವು ಹೊಸ ಆವೇಗವನ್ನು ತರುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಅವರು ಹೇಳಿದರು.

ಗಯಾನೀಸ್ ಅಧ್ಯಕ್ಷ  ಮೊಹಮ್ಮದ್ ಇರ್ಫಾನ್ ಅಲಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಗಯಾನಾಕ್ಕೆ ಭೇಟಿ ನೀಡಿದ್ದಾರೆ ಎಂದು ಎಂಇಎ ತಿಳಿಸಿದೆ. ಗಯಾನಾ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಮತ್ತು ಭವಿಷ್ಯದಲ್ಲಿ ಭಾರತವು ವಿವಿಧ ಕ್ಷೇತ್ರಗಳಲ್ಲಿ ಅವರೊಂದಿಗೆ ಪಾಲುದಾರಿಕೆ ಹೊಂದಲಿದೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪೂರ್ವ) ಜೈದೀಪ್ ಮಜುಂದಾರ್ ಹೇಳಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb