ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಬೈಡನ್ ಆಡಳಿತವು ಉಕ್ರೇನ್ ಗೆ ಅಮೆರಿಕ ಪೂರೈಸಿದ ಶಸ್ತ್ರಾಸ್ತ್ರಗಳ ಬಳಕೆಯ ಮೇಲಿನ ದೀರ್ಘಕಾಲದ ನಿರ್ಬಂಧಗಳನ್ನು ತೆಗೆದುಹಾಕಿದೆ. ಉಕ್ರೇನ್ ಪಡೆಗಳು ರಷ್ಯಾದ ಭೂಪ್ರದೇಶದ ಹೊಳಗೆ ದಾಳಿ ಮಾಡಲು ಅನುವು ಮಾಡಿಕೊಟ್ಟಿದೆ. ಈ ಕ್ರಮವು ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುವ ನಿರೀಕ್ಷೆಯಿದೆ.
ATACMS ಮಿಸಾಯಿಲ್ ಸೇರಿದಂತೆ ಯುಎಸ್ ನ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಮೊದಲ ಬಾರಿಗೆ, ಉಕ್ರೇನ್ ಶೀಘ್ರದಲ್ಲೇ ತನ್ನ ಗಡಿಗಳನ್ನು ಮೀರಿ ರಷ್ಯಾದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಅತಿ ದೂರದ ವರೆಗೆ ಸಾಗಬಲ್ಲ ಕ್ಷಿಪಣಿ ಬಳಸಿ ದಾಳಿಗಳನ್ನು ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಸುಮಾರು 190 ಮೈಲಿ (306 ಕಿ,ಮೀ) ಸಾಗಬಲ್ಲ ಈ ಕ್ಷಿಪಣಿಗಳನ್ನು ಬಳಸುವುದರಿಂದ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಹಿನ್ನೆಡೆ ಯಾಗಲಿದೆ ಎಂದು ಹೂಹಿಸಲಾಗಿದೆ.
ಸಂಘರ್ಷ ಉಲ್ಬಣದ ಬಗ್ಗೆ ಕೆಲವು ಯುಎಸ್ ಅಧಿಕಾರಿಗಳ ಕಳವಳಗಳದ ಹೊರತಾಗಿಯೂ, ಈ ಬದಲಾವಣೆಯು ಯುದ್ಧದ ನಿರ್ಣಾಯಕ ಹಂತದಲ್ಲಿ ಉಕ್ರೇನ್ಗೆ ಅನುಕೂಲವನ್ನು ಒದಗಿಸುತ್ತದೆ.
ಜನವರಿ 20 ರಂದು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಕೆಲವೇ ತಿಂಗಳುಗಳ ಮೊದಲು ಈ ನಿರ್ಧಾರ ತೆಗೆದು ಕೊಂಡಿರುವುದು ಅತಿ ಮಹತ್ವ ಪಡೆದುಕೊಂಡಿದೆ.