ಲಕ್ಷ್ಮೇಶ್ವರ : ತಾಲೂಕಿನಾದ್ಯಂತ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ತಾಲೂಕು ಪಂಚಾಯತಿಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಂದೇಶ ಭಾಷಣಗಳು ದೇಶಭಕ್ತಿ ಸಾರಿದವು.
ವರದಿ : ಪರಮೇಶ ಎಸ್ ಲಮಾಣಿ.
ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಕಾರಿಗಳು ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭ ಹಲವು ವಿಶೇಷತೆಗಳಿಂದ ಕೂಡಿತ್ತು. ಪಂಚಾಯಿತಿ ಸಿಬ್ಬಂದಿಗಳು , ಆರ್.ಎನ್.ಎಲ್.ಎಂ ಆರ್ ಸಿಬ್ಬಂದಿಗಳು , ಅಧಿಕಾರಿಗಳು ವಿಶೇಷ ಉಡುಪು ಧರಸಿದ್ದು ವಿಶೇಷವಾಗಿತ್ತು.
ಆಡಳಿತ ಅಧಿಕಾರಿ ಎಂ.ವಿ ಚಳಗೇರಿ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಮತ್ತು ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ ಮಡಿವಾಳರ ಸಂದೇಶದ ಭಾಷಣ ಆರೋಗ್ಯಕರ ಸಮಾಜ ನಿರ್ಮಾಣದ ಸಂಕಲ್ಪಕ್ಕೆ ಪ್ರೇರಣಿ ನೀಡಿತು.
ಒಟ್ಟುಗೂಡಿ ದುಡಿಯೋಣ..
ಸಾಧು ಸಂತರ, ಸ್ವಾತಂತ್ರ್ಯ ಯೋಧರ, ದೇಶ ಪ್ರೇಮಿಗಳ, ಹಿರಿಯರ ಹೋರಾಟ ಹಾಗೂ ಪರಿಶ್ರಮದಿಂದ ಕಟ್ಟಿ ಬೆಳೆಸಿರುವ ಈ ಭವ್ಯ ಭಾರತದ ಭವಿಷ್ಯವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಸವಾಲುಗಳು ನಮ್ಮ ಮುಂದಿದ್ದು, ಈ ಕಾರ್ಯದ ಯಶಸ್ಸಿಗೆ ನಾವೆಲ್ಲರೂ ಒಟ್ಟಾಗಿ ದುಡಿಯೋಣ ಎಂದು ಅವರು ಕರೆ ನೀಡಿದರು.
ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ ಶುಭ ದಿನದಲ್ಲಿ ನಾವೆಲ್ಲರೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದರಲ್ಲದೇ,
ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು ಮತ್ತು ದೇಶದ ಉಳಿವಿಗಾಗಿ ದುಡಿಯಬೇಕಯ, ಪರಿಸರ ಸಂರಕ್ಷಣೆ ಮಾಡಬೇಕು ಎಂದರು.
ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಸದಸ್ಯ ಕಲ್ಲಪ್ಪ, ಶಶಿಕಲಾ ಬಡಿಗೇರಿ, ಪಂಚಾಯತ ಅಧಿಕಾರಿ ಶ್ರೀಕಾಂತ ಮತ್ತು ಸಿಬ್ಬಂದಿಗಳು ಇದ್ದರು.
