ಗದಗ: ಯವನಿಧಿ ಯೋಜನೆಯಲ್ಲಿ ಪದವಿದರರಿಗೆ 3000ರೂ. ಮತ್ತು ಡಿಪ್ಲೋಮದರರಿಗೆ 1500ರೂ. ಗಳನ್ನು ನಿರುದ್ಯೋಗಿ ಭತ್ಯಯಾಗಿ ನಿಡುತ್ತಿದ್ದು ಜನೇವರಿ-2023 ರ ನಂತರ ತೇರ್ಗಡೆಯಾಗಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಹಾಗೂ ಫಲಿತಾಂಶದ ನಂತರ ನಿರುದ್ಯೋಗಿಯಾಗಿ 180 ದಿನಗಳನ್ನು ಪೂರೈಸಿದ ಅರ್ಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿರುತ್ತದೆ.
ಅಭ್ಯರ್ಥಿಗಳು ಈ ಪ್ರಯೋಜನವನ್ನ ಪ್ರತಿ ತಿಂಗಳು ಪಡೆಯಲು,ತಾನು ನಿರುದ್ಯೋಗಿಯೆಂದು ವ್ಯಾಸಂಗ ಮುಂದುವರೆಸುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೋಗಿಯಾಗಿಲ್ಲವೆಂದು ಸ್ವಯಂ ಘೋಷಣೆಯನ್ನು ಪ್ರತಿ ತಿಂಗಳು 25 ರೊಳಗಾಗಿ ಸ್ವಯಂ ಧೃಡಿಕರಣ ಮಾಡಬೇಕು.
ಸೇವಾ ಸಿಂಧು ಪೋರ್ಟಲ್ ಲಾಗಿನ್‌ನಲ್ಲಿ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿ ದಾಖಲೆ ಪರಿಶೀಲನೆ ಬಾಕಿ ಉಳಿದಿರುವ ಅಭ್ಯರ್ಥಿಗಳು ಎಲ್ಲ ಮೂಲ ದಾಖಲೆಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಗೆ ಖುದ್ದಾಗಿ ಸಂಪರ್ಕಿಸಿ ತಮ್ಮ ದಾಖಲೆಗಳನ್ನು ಪರಿಶೀಲಿಸಿ ದೃಢೀಕರಿಸಿಕೊಳ್ಳಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಃ 08372-220609. ಗೆ ಸಂಪರ್ಕಿಸಬಹುದಾಗಿದೆ.