ಹೊರ ರಾಜ್ಯದಲ್ಲಿ ಬಂಜಾರ ಸಮಾಜದ ಏಳಿಗಾಗಿ ಹಾಗೂ ರಕ್ಷಣೆಗಾಗಿ ದುಡಿಯುತ್ತಿರುವ ಗದಗ ತಾಲೂಕಿ ಕಳಸಾಪೂರ ಗ್ರಾಮದ , ಆಲ್ ಗೋವಾ ಬಂಜಾರ ಸಮಾಜದ ರಾಜ್ಯ ಅಧ್ಯಕ್ಷ ಆನಂದ ಅಂಗಡಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಸಮಾಜ ಜಾಗೃತಿ ಸಮಾರಂಭದಲ್ಲಿ ಗೋವಾದ ಶಾಲಾ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್, ಪುಸ್ತಕಗಳನ್ನು ನೀಡುವದರ ಮೂಲಕ ಅವರ 50 ನೇ ಹುಟ್ಟುಹಬ್ಬವನ್ನು ಗೋವಾ ರಾಜ್ಯದ ಮಡಗಾಂವ ನಲ್ಲಿ ಆಲ್ ಗೋವಾ ಬಂಜಾರ ಹಾಗೂ ಬಂಜಾರ ಸಮಾಜದವರು ಆಚರಿಸಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ ಬಂಜಾರ ಸಮಾಜದ ಏಳಿಗೆಗಾಗಿ, ಸಂರಕ್ಷಣೆಯ ವಿಚಾರದಲ್ಲಿ ಹೋರಾಟ ಮಾಡುತ್ತಿರುವ ಬಂಜಾರ ಸಮಾಜದ ನೂರಾರು ಕಟ್ಟಾಳುಗಳನ್ನು ಬೆಳೆಸಿ ನಾಯಕರನ್ನಾಗಿ ಮಾಡಿದ ಕೀರ್ತಿ ಆನಂದ ಅಂಗಡಿಯವರಿಗೆ ಸಲ್ಲುತ್ತದೆ ಎಂದರು.

ನಂತರ ಮಾತನಾಡಿದ ಶಾಸಕ ಉಲ್ಲಾಸ ಕುಯಕರ, ಶಾಸಕ ದಾಜಿ, ಎಎಪಿ ಲಿದಾರ ನಿತೇಶ ಭಗತ್, ಮತ್ತು ಎಸ್ ಪಿ ಸಂತೋಷ ದೇಸಾಯಿ ಮಾತನಾಡಿ ಬೇರೆ ಬೇರೆ ರಾಜ್ಯಗಳಿಂದ ಗೋವಾ ರಾಜ್ಯಕ್ಕೆ ಗೂಳೆ ಬಂದು ಕಷ್ಟಪಟ್ಟು ದುಡಿದು ತಮ್ಮ ಮಕ್ಕಳಿಗೆ ವಿದ್ಯೆ ಕಳಿಸುತ್ತಾರೆ. ಗೋವಾ ರಾಜ್ಯದಲ್ಲಿ ಬಂಜಾರಾ ಸಂಘಟನೆ ಕಟ್ಟಿ ಸಮಾಜದ ಏಳಿಗೆಗಾಗಿ ದುಡಿದು ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.
ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿ ಕತ್ತರಿಸಿ ಎಲ್ಲರಿಗೂ ಸಿಹಿ ಹಂಚಿ ಬಂಜಾರ ಸಮಾಜಕ್ಕೆ ಜಾಗೃತಿ ಮಾಡಿದರು.
ದೇಶದ ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ್ದ ಅತಿಥಿಗಳು ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.