9
ಬೆಂಗಳೂರು: ಭ್ರಷ್ಟಾಚಾರ, ಆದಾಯಕ್ಕಿಂತಲೂ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದಾರೆ.
ರಾಜ್ಯದ 25ಕ್ಕೂ ಹೆಚ್ಚು ಕಡೆ ಭ್ರಷ್ಟ ತಿಮಿಂಗಿಲಗಳನ್ನು ಬೇಟೆಯಾಡುತ್ತಿದ್ದಾರೆ. ವಾರದ ಹಿಂದಷ್ಟೇ ಲೋಕಾಯುಕ್ತ ಪೊಲೀಸರು, ಬೆಳಗಾವಿ, ಕಲಬುರ್ಗಿ, ರಾಮನಗರ ಸೇರಿ 37 ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಹಾವೇರಿಯಲ್ಲಿ ಎಂಜಿನಿಯರ್ ಕಾಶೀನಾಥ ಭಜಂತ್ರಿ 9 ಲಕ್ಷ ರೂ.ಗಳನ್ನು ಕಿಟಕಿಯಿಂದ ಹೊರಗೆಸೆದಿದ್ದರು.
ಇದೀಗ ಮತ್ತೇ 25 ಕಡೆ ದಾಳಿ ನಡೆಸಿದ ಲೋಕಾ ಅಧಿಕಾರಿಗಳು ಚುಮು ಚುಮು ಚಳಿಯ ನಡುವೆ
ಬೆಳ್ಳಂ ಬೆಳಿಗ್ಗೆ ಬಿಸಿ ಮುಟ್ಟಿಸಿದ್ದಾರೆ.