ತುಮಕೂರು: ಗ್ರಾಮದಲ್ಲಿ ಆತಂಕ ತಂದೊಡ್ಡಿದ್ದ ಚಿರತೆಯನ್ನ, ಯುವಕನೊಬ್ಬ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ.
ಯುವಕನ ಧೈರ್ಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳೇ ಶಾಕ್ ಆಗಿದ್ದು, ಚಿರತೆ ಬಾಲ ಹಿಡಿದು ಬೋನಿಗೆ ದಬ್ಬಿದ ಆನಂದ್ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವು ದಿನಗಳಿಂದ ರಂಗಾಪುರ ಗ್ರಾಮದ ಸುತ್ತಮುತ್ತಲೂ ಓಡಾಡುತ್ತಿದ್ದ ಚಿರತೆ ಆತಂಕ ಸೃಷ್ಟಿ ಮಾಡಿತ್ತು.ಇಂದು ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬುವರ ಮನೆ ಬಳಿ ಚಿರತೆ ಕಾಣಿಸಿಕೊಂಡಿತ್ತು.
ಈ ವೇಳೆ ಕಾರ್ಯಪ್ರೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿಗಳು, ಸಕಲ ಸಲಕರಣೆಗಳೊಂದಿಗೆ ಬಂದಿದ್ದರು.ಬಲೆ ಬಿಟ್ಟು ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದರು.ಆದರೆ ಸಿಬ್ಬಂದಿ ಕೈಗೆ ಸಿಗದೇ ಎಸ್ಕೇಪ್ ಆಗುತ್ತಿದ್ದ ಚಿರತೆಯನ್ನ, ಯುವಕ ಆನಂದ್, ಅದರ ಬಾಲ ಹಿಡಿದು ಬೋನಿಗೆ ದಬ್ಬಿದ್ದಾರೆ.
ಆನಂದನ ಧೈರ್ಯ ಮತ್ತು ಸಾಹಸಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ಖುಷ್ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.