ಲಕ್ಷ್ಮೇಶ್ವರ:ಪಟ್ಟಣದ ಶ್ರೀಮತಿ ಕಮಲಾ ಶ್ರೀವೆಂಕಪ್ಪ ಎಂ ಅಗಡಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ 21 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಝಿ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸ್ ಲಿಮಿಟೆಡ್ ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಮುಕುಂದ ಗಲ್ಲಗಲ್ಲಿ ಅವರು ಮಾತನಾಡಿ ಪ್ರತಿಭಾನ್ವಿತರು ಮೇಧಾವಿಗಳು ಜಗತ್ತಿನ್ಯಾದ್ಯಂತ ಗೌರವಿಸಲ್ಪಪಡುತ್ತಾರೆ. ಶಿಕ್ಷಣ ಪ್ರಭಲ ಅಸ್ತ್ರವಾಗಿದ್ದಲ್ಲಿ ಜೀವನದ ಗುರಿ ಮುಟ್ಟಲು ಸಿದ್ದಿ ಸಂಕಲ್ಪ ಮತ್ತು ನಿರ್ಧಾರಗಳು ಅವಶ್ಯಕ ಹಾಗೂ ಇಂದಿನ ಜಾಗತಿಕ ವ್ಯವಸ್ಥೆಯಲ್ಲಿ ಸಾಕಷ್ಟು ಅವಕಾಶಗಳು ಇದ್ದು ಜೀವನದ ಗುರಿ ಮತ್ತು ಕನಸು ನನಸಾಗಿಸಲು ಶಿಸ್ತು ಮತ್ತು ಬದ್ಧತೆ ಅವಶ್ಯ ಎಂದರು
ಸಂಸ್ಥೆಯ ಸಂಸ್ಥಾಪಕರು ಇಂಥಹ ಗ್ರಾಮೀಣ ಪ್ರದೇಶದಲ್ಲಿ ಸಂಸ್ಥೆಯನ್ನು ಹುಟ್ಟು ಹಾಕಿ 21 ವರ್ಷಗಳ ಸಾಧನೆ ಹೆಮ್ಮೆಯ ಪಡುವಂಥದ್ದು ಜೊತೆಗೆ ವೈದ್ಯಕೀಯ ಕ್ಷೇತ್ರದೊಂದಿಗೆ ಪ ಪಂ ಕಾಲೇಜ ಸ್ಥಾಪಿಸಿರುವುದು ದೂರದೃಷ್ಠಿ ಸಂಕೇತ ಎಂದರು ತಾವು ಕೂಡ ಸಾಮಾನ್ಯ ಕುಟುಂಬದಿಂದ ಬಂದು ಇಂದು ಈ ಮಟ್ಟಕ್ಕೆ ಬೆಳೆಯಲು ಹೋರಾಟ ಕಠಿಣ ಪರಿಶ್ರಮ ಮತ್ತು ಸ್ಪರ್ಧೆಗಳನ್ನು ಗೆದ್ದು ಇಷ್ಟು ದೊಡ್ಡಮಟ್ಟಕ್ಕೆ ಬೆಳೆದಿರುದಾಗಿ ತಿಳಿಸಿ, ವಿದ್ಯಾರ್ಥಿಗಳು ಸಹ ಶಿಕ್ಷಣದೊಂದಿಗೆ ಸಂಸ್ಕಾರ ರೂಢಿಸಿಕೊಂಡು ಜೀವನ ರೂಪಿಸಕೊಳ್ಳಬೇಕು ಎಂದರು
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹರ್ಷವರ್ಧನ ಅಗಡಿ ಮಾತನಾಡಿ,ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಎಲ್ಲರ ಪರಿಶ್ರಮ ಸಹಕಾರ ಕಾರಣವಾಗಿದ್ದು ಕಾಲೇಜಿನ ಬೋಧಕ ಭೋದಕೇತರ ಸಿಬ್ಬಂದಿಗಳಿಗೆ ಸೌಲಭ್ಯ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕೈಗೊಳ್ಳುವ ಎಲ್ಲ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಗೀತಾ ಅಗಡಿ, ಸಮೀರ ಆನಂದ ಅಗಡಿ, ಟ್ರಸ್ಟಿ ಸಿಸಿರ ದೇಸಾಯಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾರ್ಚಾರ್ಯ ಪರಶುರಾಮ ಬಾರ್ಕಿ, ಡಾ.ಎನ್.ಹಯವದನ, ಡಾ.ರಾಜೇಖರ ಮೂಲಿಮನಿ, ದಿವ್ಯಾಶ್ರೀ ಹಡಗಲಿ ಇದ್ದರು. ಕಾರ್ಯಕ್ರಮವನ್ನು ಪರಶುರಾಮ ಬಾರ್ಕಿ ಎನ್ ಹಯವದನ ರಾಜಶೇಖರ ಮೂಲಿಮನಿ ದಿವ್ಯಾಶ್ರೀ ಹಡಗಲಿ ಲಕ್ಷ್ಮೀ ನಿಶಾ ನಿರ್ವಹಿಸಿದರು.