Headlines

17 ನೇ ವಾರ್ಷಿಕೋತ್ಸವ: ಮುಂಡರಗಿಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಮುಂಡರಗಿ: ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ 17ನೇ ವಾರ್ಷಿಕೋತ್ಸವದ ಅಂಗವಾಗಿ ಇದೇ ಡಿ.2 ಮತ್ತು 3 ರಂದು ಜಾತ್ರಾ ಮಹೋತ್ಸವ ನೆರವೇರಲಿದೆ ಎಂದು ಸೇವಾ ಸಮಿತಿಯ ಸದಸ್ಯರಾದ ವಿ.ಜೆ.ಹಿರೇಮಠ ತಿಳಿಸಿದರು.

ಈ ಕುರಿತು ದೇವಸ್ಥಾನದಲ್ಲಿ ಸೇವಾ ಸಮಿತಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ದಿ.2 ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ಕಳಸಾರೋಹಣ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನ ಶ್ರೀ ಮನಿಪ್ರ ಜಗದ್ಗುರು ನಾಡೋಜ‌ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳ ಅಮೃತ‌ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ.

ಸಂಜೆ 4-30 ಗಂಟೆಗೆ ಪಲ್ಲಕ್ಕಿ ಉತ್ಸವ ಜರುಗಲಿದ್ದು, ಡಿ.3 ರಂದು ಮಂಗಳವಾರ, ಬೆಳಿಗ್ಗೆ 8-30 ಗಂಟೆಗೆ ಅಗ್ನಿ ಮಹೋತ್ಸವ, 11-30 ಗಂಟೆಗೆ ಉಚಿತ ಸಾಮೂಹಿಕ ವಿವಾಹ ಹಾಗೂ ಸಂಜೆ 7 ಗಂಟೆಗೆ ಸಹಸ್ರ ದೀಪೋತ್ಸವದೊಂದಿಗೆ ಕಾರ್ತಿಕ ಮಂಗಲ ಜರುಗಲಿದೆ ಎಂದು ತಿಳಿಸಿದರು.

ಸಮಾರಂಭದ ದಿವ್ಯ‌ ಸಾನಿಧ್ಯವನ್ನ ಶ್ರೀ ಜಗದ್ಗುರು ನಾಡೋಜ‌ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ವಹಿಸಲಿದ್ದು, ಲಿಂಗನಾಯಕನಹಳ್ಳಿಯ ಶ್ರೀ ಮನಿಪ್ರ ಚೆನ್ನವೀರ ಮಹಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಇದೇ ವೇಳೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಜಿ.ಬಿ. ಬೀಡನಾಳವರಿಗೆ ವೀರಭದ್ರೇಶ್ವರ ಪ್ರತಿಷ್ಠಾನ ಪುರಸ್ಕಾರವನ್ನ ನೀಡಲಾಗುವದು.

ಸಮಾರಂಭದ ಅಧ್ಯಕ್ಷತೆಯನ್ನ ಸೇವಾ ಸಮಿತಿ ಅಧ್ಯಕ್ಷರಾದ ಸಂಗಪ್ಪ ಲಿಂಬಿಕಾಯಿವರು ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ, ಪುರಸಭೆ ಅಧ್ಯಕ್ಷೆ, ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷರಾದ ನಾಗೇಶ ಹುಬ್ಬಳ್ಳಿ, ಸದಸ್ಯರಾದ ಕವಿತಾ ಉಳ್ಳಾಗಡ್ಡಿ, ಹಾಗೂ ಶಾಂತಪ್ಪ ಕರಡಿಕೊಳ್ಳ ಸೇರಿದಂತೆ,‌ಜಾತ್ರಾ ಮಹೋತ್ಸವದಲ್ಲಿ ಸಾವಿರಾರು‌ ಸದ್ಭಕ್ತರು ಪಾಲ್ಗೊಂಡು ಸ್ವಾಮಿಯ‌ ಕೃಪೆಗೆ ಪಾತ್ರರಾಗಲಿದ್ದಾರೆ ಎಂದು ತಿಳಿಸಿದರು.

ಈ ಬಾರಿ ಒಟ್ಟು 45 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಲಿದ್ದು, ವಾರ್ಷಿಕೋತ್ಸವದ ನಿಮಿತ್ಯ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮಗಳು ಜರುಗಲಿವೆ. ಪಟ್ಟಣದ ಜನತೆ ಇದರ ಸದುಪಯೋಗವನ್ನ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಅಲ್ಲದೇ ಮುಂಬರುವ ದಿನಗಳಲ್ಲಿ ಸ್ವಾಮಿಯ ರಥೋತ್ಸವಕ್ಕೆ ಸೇವಾಸಮಿತಿ ತೀರ್ಮಾನಿಸಿದ್ದು, ರಥದ ನಿರ್ಮಾಣ‌ ಕಾರ್ಯಕ್ಕೆ ಭಕ್ತಾಧಿಗಳು ಸಹಾಯ,‌ಸಹಕಾರ ನೀಡಬೇಕೆಂದು ವಿನಂತಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಜಾತ್ರಾ‌ಕಮೀಟಿ‌ ಅಧ್ಯಕ್ಷ ವಿರೇಶ ಗುಗ್ಗರಿ, ಮಹಿಳಾ ವೇದಿಕೆ ಅಧ್ಯಕ್ಷೆ ಗೌರಮ್ಮ ಹುರಕಡ್ಲಿ, ಉಪಾಧ್ಯಕ್ಷ, ಸಾಯಿ ಪ್ರಸನ್ನ ಅಳವಂಡಿ,ಕಾರ್ಯದರ್ಶಿ ಅಶೋಕ ಕಮ್ಮಾರ್, ಸಹಕಾರ್ಯದರ್ಶಿ ಕೊಟ್ರೇಶ ನವಲಿಹಿರೇಮಠ, ಸೇವಾ ಸಮಿತಿಯ, ಈರಣ್ಣ ಕರ್ಜಗಿ, ಶಿವಯೋಗಿ ಕೊಪ್ಪಳ, ರವೀಂದ್ರಗೌಡ ಪಾಟೀಲ, ಮಹಾಂತೇಶ, ಶರಣಪ್ಪ ಅಂಗಡಿ, ಗೀತಾ ಬಣಗಾರ, ರೋಹಿಣಿ ಕುಬಸದ, ಶರಣಪ್ಪ ಕುಬಸದ, ಮಂಜುನಾಥ್ ಮುಧೋಳ ಸೇರಿದಂತೆ ಸಮಿತಿಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *