Sunday, April 20, 2025
Homeರಾಜ್ಯಜ.ಅನ್ನದಾನೀಶ್ವರ ಮಠದ 155 ನೇ ಜಾತ್ರಾ ಮಹೋತ್ಸವ: ಜಾತ್ರೆಯ ನೆಪದಲ್ಲಿ ಸಮಾಜೋದ್ಧಾರಕ ಕಾರ್ಯಗಳು! ನಾಡೋಜ.ಅನ್ನದಾನೀಶ್ವರ ಮಹಾಸ್ವಾಮಿಜಿ..

ಜ.ಅನ್ನದಾನೀಶ್ವರ ಮಠದ 155 ನೇ ಜಾತ್ರಾ ಮಹೋತ್ಸವ: ಜಾತ್ರೆಯ ನೆಪದಲ್ಲಿ ಸಮಾಜೋದ್ಧಾರಕ ಕಾರ್ಯಗಳು! ನಾಡೋಜ.ಅನ್ನದಾನೀಶ್ವರ ಮಹಾಸ್ವಾಮಿಜಿ..

ಮುಂಡರಗಿ: ಶ್ರೀಮಠದ ಜಾತ್ರೆಯ ನೆಪದಲ್ಲಿ ಸಮಾಜೋದ್ಧಾರಕ ಕಾರ್ಯಗಳನ್ನ ಹಮ್ಮಿಕೊಳ್ಳುವುದೇ ಜಾತ್ರೆಯ ಸದುದ್ದೇಶವಾಗಿದೆ ಎಂದು ಮುಂಡರಗಿ ಸಂಸ್ಥಾನಮಠದ ಶ್ರೀ ಜ. ನಾಡೋಜ. ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರು.

2025 ರ ಫೆಬ್ರುವರಿ 3 ರಿಂದ ಆರಂಭವಾಗುವ ಗದಗ ಜಿಲ್ಲೆ ಮುಂಡರಗಿ ಶ್ರೀ ಜ.ಅನ್ನದಾನೀಶ್ವರ ಸಂಸ್ಥಾನಮಠದ ಜಾತ್ರಾ ಮಹೋತ್ಸವದ ನಿಮಿತ್ಯ ಏರ್ಪಡಿಸಿದ್ದ ಪತ್ರಿಕಾ ಗೋಷ್ಟಿಯ ದಿವ್ಯ ಸಾನಿಧ್ಯವನ್ನು ವಹಿಸಿ ಪೂಜ್ಯರು ಆಶಿರ್ವಚನ ನೀಡಿದರು.

ಈ ವರ್ಷದ ಜಾತ್ರೆಯಲ್ಲಿ ಪ್ರತಿ ದಿನವೂ ಒಂದೊಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, 155 ನೇ ಜಾತ್ರೆಯ ಹಿನ್ನೆಲೆ ಪರಿಸರ ಸಂರಕ್ಷಣೆಗಾಗಿ 1500 ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಮುಖ್ಯವಾಗಿ ರೈತರಿಗೆ ಉಪಯುಕ್ತವಾಗುವಂತಹ ಕೃಷಿ ಮೇಳ ಹಾಗೂ ಆರೋಗ್ಯ ಶಿಬಿರ, ರಕ್ತದಾನ ಹಾಗೂ ಬಡಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಸರಳ ಸಾಮೂಹಿಕ ವಿವಾಹಗಳನ್ನ ಪ್ರತಿವರ್ಷ ಜಾತ್ರಾ ಸಮಯದಲ್ಲಿ ಆಯೋಜಿಸುತ್ತಾ ಬಂದಿದ್ದೇವೆ. ಹೀಗಾಗಿ ಭಕ್ತರು ತಮ್ಮ ಶ್ರೀಮಠದ ಜಾತ್ರೆಯನ್ನ ಭಕ್ತಿ, ಭಾವದೊಂದಿಗೆ ಆಚರಿಸಿ, ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಪೂಜ್ಯರು ತಿಳಿಸಿದರು.

ಜಾತ್ರಾ ಕಮೀಟಿಯ ಅಧ್ಯಕ್ಷರಾದ ವಿ.ಜಿ.ಹಿರೇಮಠ ಅವರು ಮಾತನಾಡಿ, ಮುಂಡರಗಿ ಶ್ರೀಮಠದ ಜಾತ್ರೆ ಅಂದರೆ ಕೇವಲ ಬೆಂಡು ಬೆತ್ತಾಸದ ಜಾತ್ರೆಯಲ್ಲ. ಅಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಸಮಾರಂಭಗಳು ನಡೆಯುತ್ತವೆ. ನಾಡಿನ ಹಲವಾರು ಸ್ಥಳಗಳಿಂದ ಶ್ರೀಮಠದ ಸರ್ವಧರ್ಮ ಭಕ್ತರು ಜಾತ್ರೆಗೆ ಆಗಮಿಸಿ ಕೃತಾರ್ಥರಾಗುತ್ತಾರೆ. ಹೀಗಾಗಿ ಪಟ್ಟಣದ ಜನತೆ, ನಮ್ಮ ಶ್ರೀಮಠದ ಜಾತ್ರೆಯನ್ನ ತಮ್ಮ ಕುಟುಂಬದ ಸಂಭ್ರಮವಂತೆ ಪರಿಗಣಿಸಿ,ಬೇರೆಡೆಯಿಂದ ಬಂದ ಭಕ್ತಾಧಿಕಗಳಿಗೆ ಮಠದ ಜಾತ್ರೆ ಅಂದರೆ ಹರ್ಷವಾಗುವ ರೀತಿಯಲ್ಲಿ, ಮುಂಡರಗಿ ಜನತೆ ಎಲ್ಲರೂ ಕೂಡಿಕೊಂಡು ಜಾತ್ರೆ ಆಚರಿಸೋಣ ಎಂದು ಹೇಳಿದರು.

ಶ್ರೀ ಜ.ಅ.ವಿದ್ಯಾ ಸಮಿತಿಯ ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ ಅವರು ಮಾತನಾಡಿ, ಈಗಾಗಲೇ ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವ ಆಚರಿಸುತ್ತಿದ್ದು,ಕಳೆದ ವರ್ಷದ ಜಾತ್ರಾ ಮಹೋತ್ಸವದಿಂದಲೇ ವಿದ್ಯಾ ಸಮಿತಿ ಕಾರ್ಯಕ್ರಮಗಳು ನಿರಂತರವಾಗಿ ನಡೆದಿವೆ.ಹೀಗಾಗಿ ವಿದ್ಯಾ ಸಮಿತಿಯಲ್ಲಿ ಶಿಕ್ಷಣ ಪೂರೈಸಿದ ಎಲ್ಲರೂ ಸಹ ಶ್ರೀಮಠದ ಜಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕರಬಸಪ್ಪ ಹಂಚಿನಾಳ, ಪುರಸಭೆ ಉಪಾಧ್ಯಕ್ಷರಾದ ನಾಗೇಶ ಹುಬ್ಬಳ್ಳಿ, ಜಾತ್ರಾ ಸಮಿತಿ ಉಪಾಧ್ಯಕ್ಷರಾದ ದೇವು ಹಡಪದ, ಮುದಿಯಪ್ಪ ಕುಂಬಾರ, ಕಾರ್ಯದರ್ಶಿಗಳಾದ ಶಿವು ನಾಡಗೌಡರ, ಸಹಕಾರ್ಯದರ್ಶಿ, ಶಿವು ಉಪ್ಪಾರ, ಖಜಾಂಚಿ ನಾಜರಾಜ ಮುರಡಿ ಹಾಗೂ ಕುಮಾರ ಬನ್ನಿಕೊಪ್ಪ, ಶಿವು ವಾಲಿಕಾರ್, ಗಿರೀಶ್ ಅಂಗಡಿ, ಹಾಲಯ್ಯ ಹಿರೇಮಠ ಹಾಗೂ ಶ್ರೀ ಜ.ಅ.ಅಕ್ಕನ ಬಳಗದ ಸದಸ್ಯಣಿಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ದೇವಪ್ಪ ಇಟಗಿ ಸ್ವಾಗತಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments