ಮುಂಡರಗಿ: ಲಾರಿ ಡಿಕ್ಕಿಯಾಗಿ 15 ಕುರಿಗಳು ಸಾವನ್ನಪ್ಪಿ, 30 ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿರೋ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿಯ ಟೋಲ್ ಗೇಟ್ ಬಳಿ ನಿನ್ನೆ ರಾತ್ರಿ ನಡೆದಿದೆ.
ಸಾವನ್ನಪ್ಪಿರುವ ಕುರಿಗಳು ಕಕ್ಕೂರು ಗ್ರಾಮದ ಮಂಜುನಾಥ್ ರಾಮಣ್ಣ ದಳವಾಯಿ ಅವರಿಗೆ ಸೇರಿದ ಕುರಿಗಳಾಗಿದ್ದು, ಮೈಲಾರಲಿಂಗೇಶ್ವರ ಶುಗರ್ಸ್ ಫ್ಯಾಕ್ಟರಿಯಿಂದ ಮುಂಡರಗಿ ಪಟ್ಟಣದತ್ತ ಲಾರಿ ಬರುತ್ತಿತ್ತು ಎನ್ನಲಾಗಿದೆ.
ರಾತ್ರಿಯಾಗಿದ್ದರಿಂದ ವೇಗವಾಗಿ ಬಂದ ಲಾರಿ ಕುರಿಗಳ ಮೇಲೆ, ಹರಿದು ಎದುರಿನಲ್ಲಿದ್ದ ಮತ್ತೊಂದು ಲಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ತಮಿಳನಾಡು ಮೂಲದ ಲಾರಿ ಹಾಗೂ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.