138 ಜನರಿಗೆ ಒಬ್ಬನೇ ತಂದೆಯಾ? ಹೌ ಹಾರಬೇಡಿ,ಇದು ನಾವು ಹೇಳ್ತಿರೋದಲ್ಲ. ಬಿಹಾರದಲ್ಲಿ ಚುನಾವಣೆ ವೇಳೆ ಬೆಳಕಿಗೆ ಬಂದಿರೋ ಕಹಿಸತ್ಯ!
ಹೌದು, ವಿವಿಧ ವಯಸ್ಸಿನ 138 ಜನ ಮತದಾರರ ಗುರುತಿನ ಚೀಟಿಯಲ್ಲಿ ಒಂದೇ ತರಹದ ತಂದೆ ಹೆಸರಿರುವದು ಬಯಲಾಗಿದೆ. ತಂದೆಯ ಹೆಸರನ್ನು ‘ಮುನ್ನಾ ಕುಮಾರ್’ ಎಂದು ನಮೂದಿಸಲಾಗಿದ್ದು, 138 ಮತದಾರರ ಗುರುತಿನ ಚೀಟಿಯಲ್ಲಿ ತಂದೆ ಹೆಸರು ಮುನ್ನಾ ಕುಮಾರ್ ಎಂದು ನಮೂದಾಗಿದೆ.
ತಿರ್ಹತ್ ಪದವೀಧರ ಕ್ಷೇತ್ರಕ್ಕೆ ನಡೆದ ಪರಿಷತ್ ಉಪಚುನಾವಣೆ ವೇಳೆ ಇದು ಬೆಳಕಿಗೆ ಬಂದಿದ್ದು, ಚುನಾವಣಾ ಆಯೋಗದ ತಪ್ಪಿನಿಂದ ಇದು ನಡೆದಿದೆ ಎಂದು ವರದಿಯಾಗಿದೆ.
ಔರೈ ಮತಗಟ್ಟೆಯ ಮತದಾರರ ಚೀಟಿಯಲ್ಲಿ ಈ ತಪ್ಪು ಸಂಭವಿಸಿದೆ. ಚುನಾವಣೆ ಮುಗಿದ ಬಳಿಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ತಿರ್ಹತ್ ವಿಭಾಗೀಯ ಆಯುಕ್ತ ಸರ್ವಣನ್ ಹೇಳಿದ್ದಾರೆ.