2004 ರಿಂದ 2014 ರವರೆಗೆ ಭಾರತ ಸರ್ಕಾರದ ಮುಖ್ಯಸ್ಥರಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇಂದು (ಡಿಸೆಂಬರ್ 26) ಗುರುವಾರದಂದು ನಿಧನರಾದರು.
ಮನಮೋಹನ್ ಸಿಂಗ್ ಆರೋಗ್ಯ ಹದಗೆಟ್ಟ ನಂತರ, ಅವರನ್ನು ದೆಹಲಿಯ ಏಮ್ಸ್ಗೆ ದಾಖಲಿಸಲಾಗಿತ್ತು, ಮನಮೋಹನ್ ಸಿಂಗ್ ಅವರಿಗೆ 92 ವರ್ಷ ವಯಸ್ಸಾಗಿತ್ತು ಮತ್ತು ಅವರು ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು. ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಭಾರತದ ಪ್ರಧಾನಿಯಾಗಿದ್ದರು.
ಡಾ. ಮನಮೋಹನ್ ಸಿಂಗ್ ಅವರು 26 ಸೆಪ್ಟೆಂಬರ್ 1932 ರಂದು ಆಗಿನ ಬ್ರಿಟಿಷ್ ಭಾರತದಲ್ಲಿ ಪಾಕಿಸ್ತಾನದ ಗಾಹ್ ಗ್ರಾಮದಲ್ಲಿ ಜನಿಸಿದರು. ವಿಭಜನೆಯ ನಂತರ, ಅವರ ಕುಟುಂಬ ಭಾರತಕ್ಕೆ ಬಂದಿತು.
ಭಾರತದ ಪ್ರಧಾನಿ ಆಗಿದ್ದಾಗ ಅವರು ಆರ್ಥಿಕ ತಜ್ಞ ಎಂದೇ ಹೆಸರಾಗಿದ್ದರು. ಮಾಜಿ ಪ್ರಧಾನಿ ನಿಧನರಾದ ಹಿನ್ನೆಲೆ ನಾಳೆ ಬೆಳಗಾವಿಯಲ್ಲಿ ನಡೆಯಬೇಕಿದ್ದ ಗಾಂಧಿ ಭಾರತ ಶತಮಾನೋತ್ಸವ ಕೂಡ ರದ್ದಾಗಿದೆ.
ಮನಮೋಹನ್ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ಸಂತಾಪ ಸೂಚಿಸಿದ್ದಾರೆ